ಚಿಕುನ್‌ಗುನ್ಯಾ (chikungunya) ಒಂದು ವೈರಸ್ ಸೋಂಕು. ಸೋಂಕಿತ ಈಡಿಸ್ (Aedes) ಸೊಳ್ಳೆಗಳು ಕಚ್ಚುವುದರಿಂದ ಇದು ಹರಡುತ್ತದೆ. ಡೆಂಗ್ಯೂ ಮತ್ತು ಝಿಕಾ (Zika) ಹರಡುವುದೂ ಇದೇ ಸೊಳ್ಳೆಗಳು. ಇವು ಹೆಚ್ಚಾಗಿ ಹಗಲಿನಲ್ಲಿ ಕಚ್ಚುತ್ತವೆ. ಮುಟ್ಟುವುದರಿಂದ, ಕೆಮ್ಮಿನಿಂದ ಅಥವಾ ಊಟ ಹಂಚಿಕೊಳ್ಳುವುದರಿಂದ ಇದು ಒಬ್ಬರಿಂದ ಇನ್ನೊಬ್ಬರಿಗೆ ನೇರವಾಗಿ ಹರಡುವುದಿಲ್ಲ.
ಈ ಹೆಸರು ಟಾಂಜಾನಿಯಾದ (Tanzania) ಕಿಮಕೊಂಡೆ (Kimakonde) ಭಾಷೆಯಿಂದ ಬಂದಿದೆ. ಅಲ್ಲಿ ಇದನ್ನು ಮೊದಲ ಬಾರಿಗೆ 1952 ರಲ್ಲಿ ಪತ್ತೆ ಮಾಡಲಾಯಿತು. ಇದರ ಅರ್ಥ “ಡೊಂಕಾಗಿ ಬಾಗಿಹೋಗುವುದು” (to become contorted): ಕೀಲು ನೋವಿನಿಂದ ಜನರು ಬಾಗಿ ನಡೆಯುವಂತಾಗಬಹುದು. 1970ರ ದಶಕದಿಂದ ಭಾರತದಲ್ಲಿ ದೊಡ್ಡ ಮಟ್ಟದ ಹರಡುವಿಕೆಗಳು ದಾಖಲಾಗಿವೆ, ಮತ್ತು ಈಗ ಏಷ್ಯಾ, ಆಫ್ರಿಕಾ, ಯುರೋಪ್ ಮತ್ತು ಅಮೆರಿಕ ಖಂಡಗಳ 110 ಕ್ಕೂ ಹೆಚ್ಚು ದೇಶಗಳಲ್ಲಿ ಇದು ಕಂಡುಬಂದಿದೆ.
ಹೆಚ್ಚಿನವರು ತಾವಾಗಿಯೇ ಗುಣಮುಖರಾಗುತ್ತಾರೆ. ತೀವ್ರ ಕಾಯಿಲೆ ಮತ್ತು ಸಾವು ಅಪರೂಪ, ಆದರೆ ಕೀಲು ನೋವು ವಾರಗಳು ಅಥವಾ ತಿಂಗಳುಗಳ ಕಾಲ ದೈನಂದಿನ ಕೆಲಸ ಮಾಡಲೂ ಆಗದಷ್ಟು ತೊಂದರೆ ಕೊಡಬಹುದು.

